ನವದೆಹಲಿ: ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗೆ ದಿನಕ್ಕೊಂದು ಪ್ರಶ್ನೆ ಕೇಳಿ ಇಕ್ಕಟ್ಟಿಗೆ ಸಿಲುಕಿಸಲು ಹೊರಟಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮೋದಿ ಮೌನ ಇರಿಸು ಮುರಿಸು ತಂದಿದೆ. ಇದುವರೆಗೆ ದಿನಕ್ಕೊಂದು ಪ್ರಶ್ನೆಯಂತೆ ಪ್ರಧಾನಿ ಮೋದಿ ನೀಡಿದ್ದ ವಿವಿಧ ಆಶ್ವಾಸನೆಗಳ ಬಗ್ಗೆ ಹಾಗೂ ಸರ್ಕಾರದ ವೈಫಲ್ಯದ ಬಗ್ಗೆ 10 ಪ್ರಶ್ನೆ ಕೇಳಿದ್ದ ರಾಹುಲ್ ಗಾಂಧಿ, 11 ನೇ ಪ್ರಶ್ನೆಯಾಗಿ ನೀವ್ಯಾಕೆ ನನ್ನ ಯಾವ ಪ್ರಶ್ನೆಗೂ ಉತ್ತರಿಸದೇ ಮೌನವಾಗಿದ್ದೀರಿ ಎಂದು