ತಿರುವನಂತಪುರಂ : ಇತ್ತೀಚೆಗೆ ಸಿನಿಮಾ ನಾಯಕರು ಕೂಡ ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದು, ಇದೀಗ ಮಲಯಾಳಂ ನಟ ಮೋಹನ್ ಲಾಲ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿ ಕಡೆಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂಬುದಾಗಿ ತಿಳಿದುಬಂದಿದೆ. ಮೋಹನ್ ಲಾಲ್ ಬಿಜೆಪಿ ಸೇರ್ಪಡೆಗೆ ಆರ್ಎಸ್ಎಸ್ನಿಂದ ಭಾರೀ ಕಸರತ್ತು ನಡೆಯುತ್ತಿದ್ದು, ಮೋಹನ್ಲಾಲ್ ಮೂಲಕ ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮೋಹನ್ ಲಾಲ್ ಇದೂವರೆಗೂ ಯಾವುದೇ ಅಧಿಕೃತ ಹೇಳಿಕೆ