ಕಾನ್ಪುರ: ಹೆಂಡ ಕುಡಿದ ಕೋತಿ ಹಾಗೆ ಆಡ್ತೀಯಲ್ಲೋ ಅಂತ ಆಡುಭಾಷೆಯಲ್ಲಿ ಹೇಳುವುದು ಕೇಳಿದ್ದೇವೆ. ಆದರೆ ಉತ್ತರ ಪ್ರದೇಶದಲ್ಲಿ ಕೋತಿಯೊಂದು ಇದನ್ನು ನಿಜ ಮಾಡಿದೆ. ಕಾನ್ಪುರದ ಮೃಗಾಲಯವೊಂದರ ಕಲುವಾ ಎಂಬ ಹೆಸರಿನ ಕೋತಿಯೊಂದಕ್ಕೆ ಸ್ಥಳೀಯರು ಮದ್ಯ ಕುಡಿಸಿದ್ದಾರೆ. ಹೆಂಡ ಕುಡಿದ ಕೋತಿ ಸುಮಾರು 250 ಮಂದಿಗೆ ಕಚ್ಚಿ ಗಾಯಗೊಳಿಸಿದೆ.ಈ ತಪ್ಪಿಗೆ ಕೋತಿಗೆ ಈಗ ಜೀವಮಾನ ಜೈಲು ಶಿಕ್ಷೆ ವಿಧಿಸಲಾಗಿದೆ. ಕೋತಿಗೆ ಈ ರೀತಿ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸುವುದು ನಿಜಕ್ಕೂ