ಗಾಂಧಿನಗರ : ಮೋರ್ಬಿ ತೂಗುಸೇತುವೆ ದುರಂತ ಸಂಬಂಧ ರಕ್ಷಣಾ ಕಾರ್ಯಾಚರಣೆ ಬಹುತೇಕ ಅಂತ್ಯಗೊಂಡಿದೆ. ನಾಳೆ ಗುಜರಾತ್ನಲ್ಲಿ ಶೋಕಾಚರಣೆಗೆ ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ, ಇವತ್ತು ಮೋರ್ಬಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಎಸ್ಪಿ ಕಚೇರಿಯಲ್ಲಿ ಸಿಎಂ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಮೋದಿ ಆಗಮನ ಕಾರಣ ನಿನ್ನೆ ರಾತ್ರಿ ತರಾತುರಿಯಲ್ಲಿ ಮೋರ್ಬಿ ಸರ್ಕಾರಿ ಆಸ್ಪತ್ರೆಗೆ ಸುಣ್ಣ-ಬಣ್ಣ ಬಳಿದಿದ್ದು, ವಿಪಕ್ಷಗಳಿಗೆ ಆಹಾರವಾಗಿದೆ.ದುರಂತಕ್ಕೆ ಕಾರಣರಾದವರ