ಮುಂಬೈ : ಮದುವೆ ಸಮಾರಂಭದಲ್ಲಿ ಊಟ ಮಾಡಿದ ಸುಮಾರು 60ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.ಪುಸಾದ್ ತಾಲೂಕಿನ ಶೇಂಬಳಪಿಂಪ್ರಿ ಗ್ರಾಮದಲ್ಲಿ ಸೋಮವಾರ ವಿವಾಹ ಕಾರ್ಯಕ್ರಮ ನಡೆಯಿತು. ಈ ವೇಳೆ ಊಟ ಮಾಡಿದ ಬಳಿಕ ಅನೇಕ ಮಂದಿಗೆ ವಾಂತಿ ಮತ್ತು ಸುಸ್ತು ಆರಂಭವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಪ್ರಹ್ಲಾದ್ ಚವ್ಹಾಣ್ ತಿಳಿಸಿದ್ದಾರೆ. ಇದೀಗ ಸಮೀಪದ ಹಿಂಗೋಲಿ ಜಿಲ್ಲೆಯ ಕಲ್ಮನೂರಿನಲ್ಲಿರುವ ಆಸ್ಪತ್ರೆಯಲ್ಲಿ ಸುಮಾರು 40 ರಿಂದ 45 ಮಂದಿಗೆ