ಭೋಪಾಲ್|
pavithra|
Last Modified ಮಂಗಳವಾರ, 29 ಡಿಸೆಂಬರ್ 2020 (07:54 IST)
ಭೋಪಾಲ್ : 24 ವರ್ಷದ ಮಾನಸಿಕ ಅಸ್ವಸ್ಥೆ ಪತಿಯ ಮೇಲಿನ ಕೋಪಕ್ಕೆ ತನ್ನ 5 ತಿಂಗಳ ಮಗುವಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಮಧ್ಯ ಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆ ಹಾಗೂ ಆಕೆಯ ಪತಿಗೆ ಸಣ್ಣವಿಚಾರಕ್ಕೆ ಜಗಳವಾಗಿದೆ. ಮೊದಲೇ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ಇದರಿಂದ ಕೋಪಗೊಂಡು ತನ್ನ ಹೆತ್ತವರೊಂದಿಗೆ ಹೊಲಕ್ಕೆ ಹೋದಾಗ ಮಗುವಿಗೆ ಬೆಂಕಿ ಹಚ್ಚಿ ಹುಲ್ಲಿನ ರಾಶಿಯ ಮೇಲೆ ಎಸೆದಿದ್ದಾಳೆ. ಇದನ್ನು ನೋಡಿದ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಮಗು ದಾರಿಯಲ್ಲಿಯೇ ಮೃತಪಟ್ಟಿದೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.