ಚೆನ್ನೈ: ತಾಯ್ತನ ಭಾಗ್ಯವಿಲ್ಲದವರಿಗೆ ಆರೋಗ್ಯವಂತ ಮಹಿಳೆಯರು ಅಂಡಾಣು ದಾನ ಮಾಡುವ ಮೂಲಕ ಬಂಜೆತನ ನಿವಾರಣೆಗೆ ಸಹಾಯ ಮಾಡಬಹುದು. ವೈದ್ಯಕೀಯ ಲೋಕದ ಈ ಆಧುನಿಕ ತಂತ್ರಜ್ಞಾನ ಈಗ ಮಾರಾಟ ದಂಧೆಯಾಗಿದೆ.ಇದೇ ರೀತಿ ತಾಯಿಯೊಬ್ಬಳು ತನ್ನ 16 ವರ್ಷದ ಮಗಳಿಗೆ ದುಡ್ಡಿನಾಸೆಗೆ ಅಂಡಾಣು ದಾನ ಮಾಡಲು ಬಲವಂತ ಮಾಡಿದ್ದಕ್ಕೆ ಬಂಧನಕ್ಕೊಳಗಾಗಿದ್ದಾಳೆ. ತಮಿಳುನಾಡಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.ತಾಯಿಯೇ ಖಾಸಗಿ ಸಂಸ್ಥೆಯೊಂದಕ್ಕೆ ಮಗಳ ಅಂಡಾಣು ದಾನಕ್ಕೆ ಬಲವಂತ ಮಾಡಿದ್ದಾಳೆ. ತಾಯಿ ಎರಡನೇ ಮದುವೆಯಾಗಿದ್ದು, ಮಲ ತಂದೆಯೂ