ಹೈದರಾಬಾದ್ : ಮದ್ಯದ ಅಮಲಿನಲ್ಲಿದ್ದ ಮಗನನ್ನು 55 ವರ್ಷದ ಮಹಿಳೆ ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ. ಅಪ್ಪಲ ಬಾಲ ಕೋಟಾಯ್ಯ (35) ಮೃತ ದುರ್ದೈವಿಯಾಗಿದ್ದು, ಈತ ಟ್ರಕ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಅಪ್ಪಲ ಚಿಟ್ಟೆಮಾ ಎಂದು ಗುರುತಿಸಲಾಗಿದೆ.ಆರು ವರ್ಷಗಳ ಹಿಂದೆ ಅಪ್ಪಲ ಬಾಲ ಕೋಟಾಯ್ಯ, ಕಂಚಿಕಚೆರ್ಲಾದ ಸಿರಿಶಾರನ್ನು ಮದುವೆಯಾಗಿದ್ದನು. ಆದರೆ ಇತ್ತೀಚೆಗೆ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದನು. ಆದರೆ ಭಾನುವಾರ