ನವದೆಹಲಿ: ಕಾಲ ಬದಲಾಗಿದೆ ಎಂಬ ಮಾತು ಇತ್ತೀಚೆಗೆ ಸತ್ಯವಾಗುತ್ತಿದೆ. ಮಕ್ಕಳು ಕೆಟ್ಟವರಿರುತ್ತಾರೆ ಆದರೆ ತಾಯಿ ಕೆಟ್ಟವಳು ಇರಲ್ಲ ಎಂಬ ಮಾತು ಕೂಡ ಈಗೀಗ ಸುಳ್ಳಾಗುತ್ತಿದೆ. ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ನೀರಿನ ಬಕೆಟ್ ನೊಳಗೆ ಮುಳಗಿಸಿ ಕೊಂದಿದ್ದಾಳೆ. ದೆಹಲಿಯ ಹಜ್ರತ್ ನಿಜಾಮುದ್ದೀನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತನ್ನ ಕಷ್ಟಗಳಿಗೆಲ್ಲಾ ತಾನು ಹೆತ್ತ ಈ ಹೆಣ್ಣು ಮಗುವೇ ಕಾರಣವೆಂದು ಏಳು ತಿಂಗಳ ಎಳೆಗೂಸನ್ನು ತಾಯಿಯೇ ಬಕೆಟ್ ನಲ್ಲಿ ಮುಳುಗಿಸಿ ಸಾಯಿಸಿದ್ದಾಳೆ.