ಮಗ ಕೊಡುತ್ತಿದ್ದ ಚಿತ್ರಹಿಂಸೆಯಿಂದ ಸೊಸೆಯನ್ನ ರಕ್ಷಿಸಲು ತಾಯಿಯೇ ಮಗನನ್ನ ಕೊಂದಿರುವ ಘಟನೆ ಮುಂಬೈನ ಮ್ಯಾನ್ ಖರ್ಡ್ ಪ್ರದೇಶದಲ್ಲಿ ನಡೆದಿದೆ. ಮಗ ಹತ್ಯೆ ಬಳಿಕಿಿಡೀ ರಾತ್ರಿ ತಾಯಿ ಮಗನ ಶವದ ಜೊತೆಯೇ ಕಳೆದಿರುವ ಬಗ್ಗೆ ವರದಿಯಾಗಿದೆ. ಹತ್ಯೆ ಮಾಡಿದ ಮಹಿಳೆಯನ್ನ 45 ವರ್ಷದ ಅನ್ವಾರಿ ರಿ ಇದ್ರಿಸಿ ಎಂದು ಗುರ್ತಿಸಲಾಗಿದ್ದು, ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಪೊಲೀಸರು ಹೇಳುವ ಪ್ರಕಾರ, 25 ವರ್ಷದ ನದೀಮ್ ನಾಯ್ಮ್ ತಾಯಿ, ಹೆಂಡತಿ ಮಕ್ಕಳೊಂದಿಗೆ ಅಂಬೇಡ್ಕರ್ ಚಾವ್ಲ್`ನಲ್ಲಿ