ಚೆನ್ನೈ: ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆಯೇ ಹೊರತು, ಕೆಟ್ಟ ತಾಯಿ ಇರಲ್ಲ ಎಂಬ ಮಾತಿಗೆ ಅಪವಾದವಾಗಿ ನಡೆದುಕೊಂಡಿದ್ದಾಳೆ ಈ ತಾಯಿ.18 ದಿನದ ಹಸುಗೂಸನ್ನು ಕೈಯಾರೆ ಕೊಂದು ಅನಾರೋಗ್ಯದಿಂದ ಸತ್ತಿತೆಂದು ನಾಟಕವಾಡಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. 15 ದಿನದ ಹಿಂದೆ ಈ ಘಟನೆ ನಡೆದಿದ್ದು, ಪೊಲೀಸರು ಈಗ ನಿಜಾಂಶ ಪತ್ತೆ ಮಾಡಿದ್ದಾರೆ.ಚೆನ್ನೈಯಲ್ಲಿ ಈ ಘಟನೆ ನಡೆದಿದೆ. ಮೊದಲೇ ಒಂದೂವರೆ ವರ್ಷದ ಹೆಣ್ಣು ಮಗುವಿನ ತಾಯಿಯಾಗಿರುವ ಈಕೆ ಎರಡನೇ ಬಾರಿಗೂ ಹೆಣ್ಣು ಮಗುವಿಗೆ