ಮೂಢನಂಬಿಕೆಗೆ ಬೆಲೆ ಕೊಟ್ಟು ಮಗುವಿನ ಕೊಂದ ತಾಯಿ

ಜೈಪುರ| Krishnaveni K| Last Modified ಭಾನುವಾರ, 11 ಜುಲೈ 2021 (11:16 IST)
ಜೈಪುರ: ಮೂಢನಂಬಿಕೆ ಆಚಾರ ವಿಚಾರಗಳನ್ನು ಇಂದಿಗೂ ಜನ ನಂಬಿ ಮೂರ್ಖರಾಗುತ್ತಿದ್ದಾರೆ. ಇಲ್ಲೊಬ್ಬ ತಾಯಿ ಮೂಢನಂಬಿಕೆಗೆ ಬೆಲೆಕೊಟ್ಟು ಹೆತ್ತ ಮಗುವನ್ನೇ ಕೊಂದಿದ್ದಾಳೆ.
 

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ತನ್ನ ಐದು ತಿಂಗಳ ಹಸುಗೂಸಿಗೆ ಕಾದ ಕಬ್ಬಿಣದ ಸಲಾಕೆಯಿಂದ ಬರೆ ಹಾಕಿದ್ದಾಳೆ. ಇದರಿಂದಾಗಿ ತೀವ್ರ ಸುಟ್ಟ ಗಾಯಕ್ಕೊಳಗಾದ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.
 
ಸುಟ್ಟ ಗಾಯಗಳಿಂದಾಗಿ ತೀವ್ರ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಕೃತ್ಯ ಬಯಲಿಗೆ ಬಂದಿದೆ. ಈ ಸಂಬಂಧ ತಾಯಿಯ ವಿರುದ್ಧ  ಪ್ರಕರಣ ದಾಖಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :