Widgets Magazine

ಮುಂಬೈ ಉಗ್ರ ದಾಳಿಗೆ ಇಂದು 12 ನೇ ವರ್ಷ

ಮುಂಬೈ| Krishnaveni K| Last Modified ಗುರುವಾರ, 26 ನವೆಂಬರ್ 2020 (11:43 IST)
ಮುಂಬೈ: ಮುಂಬೈನಲ್ಲಿ 2008 ರಲ್ಲಿ ಉಗ್ರರ ದಾಳಿ ನಡೆದು ಇಂದಿಗೆ 12 ವರ್ಷ.  ನವಂಬರ್ 26 ರಂದು 2008 ರಲ್ಲಿ ನಡೆದ ಲಷ್ಕರ್ ಉಗ್ರರ ದಾಳಿಗೆ ಧೀಮಂತ ಪೊಲೀಸ್ ಅಧಿಕಾರಿಗಳನ್ನು ಕಳೆದುಕೊಳ್ಳಬೇಕಾಯಿತು.

 

10 ಪಾಕ್ ಮೂಲದ ಉಗ್ರರು ಸಮುದ್ರ ಮಾರ್ಗವಾಗಿ ನಾರಿಮನ್ ಹೌಸ್‍ ಕಾಂಪ್ಲೆಕ್ಸ್, ತಾಜ್ ಹೋಟೆಲ್, ಹೋಟೆಲ್ ಓಬೆರಾಯ್-ಟ್ರೈಡೆಂಟ್ ಹೋಟೆಲ್ ಗಳ ಮೇಲೆ ದಾಳಿ ನಡೆಸಿ 190 ಕ್ಕೂ ಅಧಿಕ ಜನರ ಸಾವಿಗೆ ಕಾರಣರಾಗಿದ್ದರು. ಅಂದು ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹೆಮ್ಮೆಯ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಸಂದೀಪ್ ಉನ್ನಿಕೃಷ್ಣನ್,ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ, ತುಕರಾಮ್ ಓಂಬ್ಳೆ, ಕರಂಬೀರ್ ಸಿಂಗ್ ಕಂಗ್ ಮುಂತಾದ ಹೆಮ್ಮೆಯ ಅಧಿಕಾರಿಗಳನ್ನು ಕಳೆದುಕೊಳ್ಳಬೇಕಾಯಿತು.
ಇದರಲ್ಲಿ ಇನ್ನಷ್ಟು ಓದಿ :