ಭೋಪಾಲ್ : ಪತ್ನಿ ಹೆಸರಿನಲ್ಲಿರುವ ವಿಮೆಯ ಹಣ ಕಬಳಿಸಲು ವ್ಯಕ್ತಿಯೋರ್ವ ಇಂಟರ್ನೆಟ್ನಲ್ಲಿರುವ ವೀಡಿಯೋಗಳನ್ನು ನೋಡಿ ಟ್ರೈನಿಂಗ್ ಪಡೆದು ಹೆಂಡತಿಯನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಲ್ಲಿ ನಡೆದಿದೆ.ಆರೋಪಿ ಪತಿಯನ್ನು ಬದ್ರಿಪ್ರಸಾದ್ ಮೀನಾ ಎಂದು ಗುರುತಿಸಲಾಗಿದ್ದು, ತಾನು ಮಾಡಿದ್ದ ಸಾಲವನ್ನು ತೀರಿಸಲು ಹೆಂಡತಿಯ ವಿಮೆಯ ಹಣವನ್ನು ಕ್ಲೈಮ್ ಮಾಡಲು ಆಕೆಯನ್ನೇ ಕೊಲೆ ಮಾಡಿದ್ದಾನೆ. ಈ ಕೃತ್ಯವೆಸಗಲು ಆರೋಪಿ ಇಂಟರ್ನೆಟ್ನಿಂದ ಸಹಾಯ ಪಡೆದಿದ್ದಾನೆ. ತನ್ನ ಸಾಲವನ್ನು ತೀರಿಸುವುದು ಹೇಗೆಂದು ತಲೆಕೆಡಿಸಿಕೊಂಡಿದ್ದ ಆರೋಪಿ ಇಂಟರ್ನೆಟ್ನಲ್ಲಿ