ನವದೆಹಲಿ: ಉತ್ತರ ಪ್ರದೇಶದ ಛಪ್ರೌಲಿ ಎಂಬಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ. ಆದರೆ ವಿಶೇಷವಿರುವುದೇ ಇವರು ಮತಾಂತರಗೊಳ್ಳಲು ನೀಡಿದ ಕಾರಣದಲ್ಲಿ.ಛಪ್ರೌಲಿಯ ಅಖ್ತರ್ ಎಂಬವರು ತಮ್ಮ ಕುಟುಂಬದ 12 ಮಂದಿ ಸದಸ್ಯರೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಅನುಮಾನಸ್ಪದವಾಗಿ ಮೃತಪಟ್ಟಿದ್ದ ತಮ್ಮ ಪುತ್ರನ ಸಾವಿನ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬುದು!ಪುತ್ರನ ಸಾವಿನ ವಿಚಾರದಲ್ಲಿ ತಮ್ಮ ಜತೆಗೆ ಕಾನೂನು ಹೋರಾಟ ನಡೆಸಲು ತಮ್ಮ