ಮುಸ್ಲಿಮರು ಜಾತ್ಯಾತೀತತೆಯನ್ನು ಬಿಟ್ಟು ಕೋಮುವಾದಿಗಳಾಗಬೇಕು : ಶಾಝಿಯಾ ಇಲ್ಮಿ

ನವದೆಹಲಿ| Jaya| Last Updated: ಬುಧವಾರ, 23 ಏಪ್ರಿಲ್ 2014 (16:33 IST)
"ಮುಸ್ಲಿಮರು ಸ್ವಹಿತಾಸಕ್ತಿಗಾಗಿ ಜಾತ್ಯಾತೀತತೆಯನ್ನು ಬಿಟ್ಟು ಕೋಮುವಾದಿಗಳಾಗುವುದು ಅಗತ್ಯವಾಗಿದೆ" ಎಂದು ಆಪ್ ನಾಯಕಿ ಶಾಝಿಯಾ ಇಲ್ಮಿ ಮುಸ್ಲಿಂ ಸಮುದಾಯದ ಸದಸ್ಯರಲ್ಲಿ ಮನವಿ ಮಾಡಿಕೊಳ್ಳುವುದರ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 
 
"ಮುಸಲ್ಮಾನರು ತುಂಬಾ ಜಾತ್ಯತೀತರಾಗಿದ್ದಾರೆ, ಅವರು ಕೋಮುವಾದಿಗಳಾಗಬೇಕಾಗಿದೆ ಎಂದು ಇಲ್ಮಿ ಹೇಳುತ್ತಿರುವುದು ಕ್ಯಾಮರಾ ಒಂದರಲ್ಲಿ ಸೆರೆಯಾಗಿದೆ. 
 
ಇದು ಅತ್ಯಂತ ವಿವಾದಾತ್ಮಕ ಹೇಳಿಕೆ, ಆದರೆ ಸಮುದಾಯದ ಜನರು ತಮ್ಮ ಸ್ವಂತ ಆಸಕ್ತಿಯಿಂದ ತಮ್ಮನ್ನು ಕಾಪಾಡಿಕೊಳ್ಳಬೇಕು ಎಂದು ತಮ್ಮ ವಿವಾದಾತ್ಮಕ ಹೇಳಿಕೆಗೆ ಅವರು  ಸ್ಪಷ್ಟೀಕರಣವನ್ನು ನೀಡಿದ್ದಾರೆ. 
 
ಆ ವಿಡಿಯೋ ಯು-ಟ್ಯೂಬ್‌‌ನಲ್ಲಿ ಪೋಸ್ಟ್ ಆಗಿದ್ದು, ವಿವಿಧ ಸಾಮಾಜಿಕ ಮಾಧ್ಯಮಗಳಿಂದ ಉಗ್ರ  ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಲ್ಲಿ ಇನ್ನಷ್ಟು ಓದಿ :