ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು (CEO) ಮತ್ತು ಜಾಗತಿಕ ತೈಲ ಹಾಗೂ ಅನಿಲ ವಲಯದ ತಜ್ಞರ ಜತೆಗೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂ.ಡಿ. ಮುಕೇಶ್ ಅಂಬಾನಿ, ರಷ್ಯಾದ ರಾಸ್ನೆಫ್ಟ್ ಸಿಇಒ ಮತ್ತು ಅಧ್ಯಕ್ಷ ಡಾ. ಇಗೋರ್ ಸೆಚಿನ್, ಸೌದಿ ಅರಾಮ್ಕೋದ ಸಿಇಒ ಹಾಗೂ ಅಧ್ಯಕ್ಷ ಅಮಿನ್ ನಸೀರ್ ಮತ್ತಿತರರು ಭಾಗಿಯಾದರು. ಸ್ವಚ್ಛ ಬೆಳವಣಿಗೆ