ಅನೇಕ ಬಾರಿಗೆ ನದಿ, ಕೆರೆ ಹಾಗೂ ಹಳ್ಳಗಳ ನೀರು ಮೇಲ್ನೋಟಕ್ಕೆ ಅತ್ಯಂತ ಶಾಂತವಾಗಿ ಕಾಣಿಸುತ್ತದೆ. ಆದರೆ ನೀರಿನ ಅಡಿಯಲ್ಲಿ ಅಡಗಿರುವ ಸುಳಿಗಳು ಅಥವಾ ಅಪಾಯಕಾರಿ ಜಲಚರಗಳು ಕಣ್ಣಿಗೆ ಕಾಣಿಸುವುದಿಲ್ಲ. ಈ ಬಾಲಕ ನದಿಗೆ ಜಿಗಿದ ತಕ್ಷಣವೇ ಅಲ್ಲೇ ಹತ್ತಿರದಲ್ಲೇ ಹೊಂಚು ಹಾಕಿ ಕುಳಿತಿದ್ದ ಮೊಸಳೆಯೊಂದು ಕ್ಷಣಾರ್ಧದಲ್ಲಿ ಆತನನ್ನು ನುಂಗಲು ವೇಗವಾಗಿ ಈಜಿಕೊಂಡು ಬಂದಿದೆ. ಅದೃಷ್ಟವಶಾತ್, ಬಾಲಕ ಸಮಯಪ್ರಜ್ಞೆ ಮೆರೆದು ತನಗೆ ಎದುರಾದ ಆಪತ್ತನ್ನು ತಕ್ಷಣವೇ ಗುರುತಿಸಿ, ತಡಮಾಡದೆ ನೀರಿನಿಂದ ಹೊರಗೆ