Widgets Magazine

ಇಸ್ರೋ ಚಂದ್ರಯಾನ ಸಾಹಸದಿಂದ ಸ್ಪೂರ್ತಿ ಪಡೆದಿರುವ ಅಮೆರಿಕಾದ ನಾಸಾ ಸಂಸ್ಥೆ

ನವದೆಹಲಿ| Krishnaveni K| Last Modified ಸೋಮವಾರ, 9 ಸೆಪ್ಟಂಬರ್ 2019 (09:16 IST)
ನವದೆಹಲಿ: ಭಾರತದ ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಸಾಹಸದಿಂದ ಸ್ಪೂರ್ತಿ ಪಡೆದಿರುವ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಸೌರ ಯಾನ ಜತೆಯಾಗಿ ಮಾಡೋಣ ಎಂದು ಆಹ್ವಾನವಿತ್ತಿದೆ.

 
ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಡುವ ಇದುವರೆಗೆ ಯಾವ ರಾಷ್ಟ್ರವೂ ಮಾಡದ ಸಾಹಸವನ್ನು ಇಸ್ರೋ ಮಾಡಿತ್ತು. ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯಲು ವಿಫಲವಾದರೂ ಇಸ್ರೋದ ಈ ಸಾಹಸಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
 
ಇಸ್ರೋ ಸಾಹಸದ ಬಗ್ಗೆ ಪ್ರತಿಕ್ರಿಯಿಸಿರುವ ನಾಸಾ ನಿಮ್ಮ ಈ ಸಾಹಸ ನಮಗೆ ಹೊಸ ಸ್ಪೂರ್ತಿ ನೀಡಿದೆ. ಮುಂದಿನ ದಿನಗಳಲ್ಲಿ ಜಂಟಿಯಾಗಿ ಸೌರಯಾನ ಮಾಡೋಣ ಎಂದು ಆಹ್ವಾನವಿತ್ತಿದೆ. ದಕ್ಷಿಣ ಧ್ರುವದ ಮೇಲೆ ಕಾಲಿಡುವುದು ಅಷ್ಟು ಸುಲಭದ ಮಾತ್ರವಲ್ಲ. ಇಸ್ರೋದ ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ ಎಂದು ನಾಸಾ ಮೆಚ್ಚುಗೆ ವ್ಯಕ್ತಪಡಿಸಿದೆ.
ಇದರಲ್ಲಿ ಇನ್ನಷ್ಟು ಓದಿ :