ನವದೆಹಲಿ: ಪದ್ಮಾವತ್ ಸಿನಿಮಾ ಬಿಡುಗಡೆ ವಿರೋಧಿಸಿ ಗುರ್ ಗಾಂವ್ ನಲ್ಲಿ ಶಾಲಾ ಬಸ್ ಒಂದಕ್ಕೆ ಬೆಂಕಿ ಹಚ್ಚಿರುವ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯಿಂದಾಗಿ ದೇಶಕ್ಕೇ ಬೆಂಕಿ ಬಿದ್ದಿದೆ ಎಂದಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯವನ್ನು ಸಮರ್ಥಿಸಲು ಯಾವುದೇ ಕಾರಣಗಳಿಲ್ಲ. ಬಿಜೆಪಿ ದೇಶದೆಲ್ಲೆಡೆ, ಧ್ವೇಷ, ಹಿಂಸೆ ಹರಡುತ್ತಿದೆ. ದೇಶವೇ ಈ ಬೆಂಕಿಯಲ್ಲಿ ಉರಿಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.ಪದ್ಮಾವತ್ ಸಿನಿಮಾ ಇಂದು ಬಿಡುಗಡೆಯಾಗಿತ್ತು.