ನವದೆಹಲಿ: ಪುಲ್ವಾಮಾದಲ್ಲಿ ಯೋಧರ ಮೇಲೆ ಜೈಶ್ ಉಗ್ರರ ಅಟ್ಟಹಾಸದ ಬಳಿಕವೂ ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿದು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಪುಲ್ವಾಮಾ ದಾಳಿಯನ್ನು ಖಂಡಿಸಿ ಮಾತನಾಡಿದ್ದ ನವಜೋತ್ ಬಳಿಕ ಇದಕ್ಕೆ ಇಡೀ ಪಾಕಿಸ್ತಾನವನ್ನೇ ದೂರುವುದು ಸರಿಯಲ್ಲ ಎಂದಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಿದು ಭಾಗವಹಿಸುವ ಕಪಿಲ್ ಶರ್ಮಾ ಶೋ ಮೇಲೂ ನಿಷೇಧ ಹೇರಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪುಲ್ವಾಮ ದಾಳಿ ಖಂಡನೀಯ.