ಮಂಗಳೂರು(ಆ.12): ಕೇರಳದಲ್ಲಿ ಬಾರ್, ವೈನ್ ಶಾಪ್ ಎಂಟ್ರಿಗೂ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಪ್ರಕರಣಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಗಡಿ ಭಾಗ ಕಾಸರಗೋಡು ಸೇರಿ ರಾಜ್ಯಾದ್ಯಂತ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಕೇರಳದ ಮದ್ಯದಂಗಡಿ ಎದುರು ಜನದಟ್ಟಣೆ ಹೆಚ್ಚಾಗಿರುವ ಹಿನ್ನೆಲೆ ಕಠಿಣ ನಿಯಮ ಜಾರಿ ಮಾಡಲಾಗುತ್ತದೆ. ನೆಗೆಟಿವ್ ಸರ್ಟಿಫಿಕೇಟ್ ಅಥವಾ