ವಡೋದರಾ : ಕಟ್ಟಡ ಕಾರ್ಮಿಕನೊಬ್ಬ 7 ವರ್ಷದ ಬಾಲಕಿಗೆ ಚಾಕೋಲೇಟ್ ನೀಡುವ ನೆಪದಲ್ಲಿ ಕರೆದೊಯ್ದು ಆಕೆಯ ಮೇಲೆ ಮಾನಭಂಗ ಎಸಗಿದ ಘಟನೆ ವಡೋದರಾ ಜಿಲ್ಲೆಯ ಕರ್ಜನ್ ತಾಲೂಕಿನ ಹಳ್ಳಿಯಲ್ಲಿ ನಡೆದಿದೆ. ಆರೋಪಿ ಕರ್ಜನ್ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಬಂದಿದ್ದು, ಬಾಲಕಿಯ ಮನೆಯ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಆಕೆಗೆ ಚಾಕೋಲೇಟ್ ನೀಡುವುದಾಗಿ ತನ್ನ ಮನೆಗೆ ಕರೆದು ಆಕೆಯನ್ನು ಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.