ನಾಪತ್ತೆಯಾಗಿದ್ದ ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದ ನೇಪಾಳದ ವಿಮಾನ ಪತ್ತೆಯಾಗಿದ್ದು, ಸ್ಥಳಕ್ಕೆ ಭದ್ರತಾ ಸಿಬ್ಬಂದಿ ದೌಡಾಯಿಸಿದೆ. ಮಸ್ತಾಂಗ್ ಜಿಲ್ಲೆಯ ಮನ್ ಪಟಿ ಹಿಮಾಲ್ ಲ್ಯಾಮ್ಚೆ ನದಿಯ ಬಳಿ ವಿಮಾನ ಪತ್ತೆಯಾಗಿದ್ದು, ವಿಮಾನದಲ್ಲಿ ಇದ್ದವರ ಸ್ಥಿತಿ ಏನಾಗಿದೆ ಎಂಬುದು ತಿಳಿದು ಬಂದಿಲ್ಲ. ನಾಪತ್ತೆಯಾಗಿದ್ದ ವಿಮಾನ ಮುಸ್ತಾಂಗ್ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ವಿಮಾನದ ಕ್ಯಾಪ್ಟನ್ ಅವರ ಮೊಬೈಲ್ ನ ಸಿಗ್ನಲ್ ಆಧರಿಸಿ ಪತ್ತೆ ಹಚ್ಚಲಾಗಿದೆ. ದೂರವಾಣಿ