Widgets Magazine

ಸಾವಿಗೆ ಶರಣಾದ ನವ ವಿವಾಹಿತ ಮಾಡೆಲ್ ಪ್ರಿಯಾಂಕಾ ಕಪೂರ್

ನವದೆಹಲಿ| Jaya| Last Modified ಸೋಮವಾರ, 28 ಮಾರ್ಚ್ 2016 (08:37 IST)
ಕಳೆದ ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ 25 ವರ್ಷದ ಮಾಡೆಲ್ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಪೊಲೀಸರು ಆಕೆಯ ಪತಿ ನಿತಿನ್ ಚಾವ್ಲಾನನ್ನು ಬಂಧಿಸಿದ್ದಾರೆ.

ಮೃತಳನ್ನು ಪ್ರಿಯಾಂಕಾ ಕಪೂರ್ ಎಂದು ಗುರುತಿಸಲಾಗಿದ್ದು ಡಿಫೆನ್ಸ್ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ಶನಿವಾರ ಮುಂಜಾನೆ ಆಕೆ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ಒಳಗಿನಿಂದ್ ಲಾಕ್ ಮಾಡಿಕೊಂಡಿದ್ದರಿಂದ ತಾಯಿ ಮತ್ತು ಗಂಡ ಫೋನ್ ಕರೆ ಮಾಡಿದ್ದಾರೆ. ಆದರೆ ಆಕೆಯಿಂದ ಯಾವುದೇ ಉತ್ತರ ಬರದಿದ್ದಾಗ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಕದ ಒಡೆದು ಹೊರ ಬಂದಾಗ ಪ್ರಿಯಾಂಕಾ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ.

ಆಕೆ ಶುಕ್ರವಾರ ರಾತ್ರಿ ಸಾವಿಗೆ ಶರಣಾಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಮೃತಳ ಸಹೋದರಿ ಡಿಂಪಿ, ನಿತಿನ್ ವರದಕ್ಷಿಣೆಗಾಗಿ ಪ್ರಿಯಾಂಕಾಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ.


ಮೃತಳು ಬರೆದಿರುವ ಡೆತ್ ನೋಟ್‌ನಲ್ಲಿ ಕೂಡ ಪತಿ ವಿರುದ್ಧ ವರದಕ್ಷಿಣೆ ಆರೋಪವನ್ನು ಮಾಡಿದ್ದಾಳೆ. ತನ್ನ ಪ್ರಥಮ ಪತ್ನಿಗೆ ವಿಚ್ಛೇದನ ನೀಡಿ ಚಾವ್ಲಾ ಪ್ರಿಯಾಂಕಾಳನ್ನು ವರಿಸಿದ್ದ ಎಂದು ತಿಳಿದು ಬಂದಿದೆ.ಇದರಲ್ಲಿ ಇನ್ನಷ್ಟು ಓದಿ :