ನವದೆಹಲಿ: 2012 ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ದೋಷಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲ್ ನಲ್ಲಿ ಸಿದ್ಧತೆ ಆರಂಭವಾಗಲಿದೆ.ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳಿಗೆ ನೇಣು ಶಿಕ್ಷೆ ಜಾರಿಗೊಳಿಸಲು ಹಗ್ಗ ಸಿದ್ಧ ಮಾಡಿಕೊಡಲು ಬಿಹಾರ ಬಕ್ಸಾರ್ ಜಿಲ್ಲೆಯ ಪರಿಣಿತರಿಗೆ ಸೂಚಿಸಲಾಗಿದೆ. ಇನ್ನು ಎರಡು ದಿನಗಳೊಳಗೆ ಈ ಹಗ್ಗ ತಿಹಾರ್ ಜೈಲು ತಲುಪುವ ಸಾಧ್ಯತೆಯಿದೆ. ಸದ್ಯಕ್ಕೆ ಹ್ಯಾಂಗ್ ಮ್ಯಾನ್ ಗಳಿಗಾಗಿ ಹುಡುಕಾಟವೂ ನಡೆಸಲಾಗುತ್ತಿದೆ.ಎಲ್ಲಾ ಸರಿಹೋದರೆ ಇದೇ ತಿಂಗಳು ನಿರ್ಭಯಾ