ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದೂ ಕೂಡಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದು, ಕೃಷಿ ವಲಯ ಇಂದು ಹೆಚ್ಚು ನಿರೀಕ್ಷೆಯಿಟ್ಟುಕೊಂಡಿದೆ. ನಿನ್ನೆಯಂತೆ ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿರುವ ನಿರ್ಮಲಾ ಸೀತಾರಾಮನ್ ಹೊಸ ಯೋಜನೆಗಳ ಘೋಷಣೆ ಮಾಡಲಿದ್ದಾರೆ. ಕಾರ್ಮಿಕ ಮತ್ತು ಕೃಷಿ ವಲಯಕ್ಕೆ ಇಂದಿನ ಪ್ಯಾಕೇಜ್ ನಲ್ಲಿ ಹೆಚ್ಚು ಒತ್ತು ಸಿಗಲಿದೆ.ಕೃಷಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಯಂತ್ರೋಪಕರಣಗಳ ಖರೀದಿಗೆ ಪ್ರೋತ್ಸಾಹ ಇತ್ಯಾದಿ ಹೊಸ ಯೋಜನೆಗಳನ್ನು ಘೋಷಿಸುವ