ನವದೆಹಲಿ: ಕೊರೋನಾವೈರಸ್ ನೈಸರ್ಗಿಕವಲ್ಲ, ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಿದ್ದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.ಅಮೆರಿಕಾ ಮೊದಲಿನಿಂದಲೂ ಇದು ಚೀನಾದ ಪ್ರಯೋಗಾಲಯದಲ್ಲಿ ಸೃಷ್ಟಿಯಾದುದು ಎಂದು ಆರೋಪಿಸುತ್ತಲೇ ಬಂದಿದೆ. ಇದೀಗ ಇದೇ ವಾದವನ್ನು ಕೇಂದ್ರ ಸಚಿವರೂ ಮಾಡಿದ್ದಾರೆ. ನಮ್ಮ ಜೀವನದ ಶೈಲಿ ಬದಲಾಯಿಸುವುದು ಮುಖ್ಯ. ಯಾಕೆಂದರೆ ಇದು ನೈಸರ್ಗಿಕ ವೈರಸ್ ಅಲ್ಲ. ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಿರುವುದು. ವಿಶ್ವದ ಅನೇಕ ರಾಷ್ಟ್ರಗಳು ಇದಕ್ಕೆ ವ್ಯಾಕ್ಸಿನ್ ಕಂಡುಹಿಡಿಯುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.