ನವದೆಹಲಿ: ವರದಕ್ಷಿಣೆ ಕಿರುಕುಳ ಪ್ರಕರನಕ್ಕೆ ಸಂಬಂಧಿಸಿದಂತೆ ಪ್ರಕರಣದ ನೈಜತೆ ಪರಿಶೀಲಿಸದೇ ಆರೋಪಿಗಳನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ವರದಕ್ಷಿಣೆ ವಿರೋಧಿ ಕಾನೂನನ್ನು ಹಲವರು ದುರ್ಬಳಕೆ ಮಾಡುತ್ತಿರುವುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ಡೌರಿ ಕೇಸ್ಗಳಲ್ಲಿ ಆರೋಪಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಯಾವುದೇ ಬಂಧನ ನಡೆಸಬಾರದು ಎಂದು ಸೂಚಿಸಿದೆ. ದಾಂಪತ್ಯದಲ್ಲಿನ ಬಿರುಕು, ಅಸಮಾಧಾನ ಇತ್ಯಾದಿಗಳ ಕಾರಣಕ್ಕೆ ವಿವಾಹಿತ ಮಹಿಳೆಯರು ಐಪಿಸಿ ಸೆ.498ಎ ಇದರ ದುರ್ಬಳಕೆ ಮಾಡಿ ಪತಿಯ