ಭೋಪಾಲ್ : ಭಿಕ್ಷೆ ಬೇಡಿದರೂ ಊಟ ಸಿಗಲಿಲ್ಲ, ಮನನೊಂದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ರಿಂಕಿ (22) ಮೃತಳಾಗಿದ್ದಾಳೆ. ಸುಮಾರು ಎರಡೂವರೆ ವರ್ಷದ ಹಿಂದೆ ರಾಜ್ಕುಮಾರ್ ಎನ್ನುವನನ್ನು ಈಕೆ ವಿವಾಹವಾಗಿದ್ದರು. ದಂಪತಿಗೆ 17 ತಿಂಗಳ ಮಗು ಇದೆ. ಪತಿ ರಾಜ್ಕುಮಾರ್ ಗುರುವಾರ ಪಡಿತರ ತೆಗೆದುಕೊಂಡು ಬರಲು ಹೋಗಿದ್ದ ವೇಳೆ ರಿಂಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಒಂದು ವಾರದಿಂದ ಕುಟುಂಬಕ್ಕೆ ಊಟಕ್ಕೆ ಸಮಸ್ಯೆಯಾಗುತ್ತಿತ್ತು. ಯಾರೂ ಕೆಲಸವನ್ನು ಕೊಡುತ್ತಿರಲಿಲ್ಲ. ಇದರಿಂದಾಗಿಯೇ ರಿಂಕಿ ಭಿಕ್ಷಾಟನೆಗೆ ತೆರಳುತ್ತಿದ್ದಳು.