ನವದೆಹಲಿ : ಅಗ್ನಿಪಥ್ ಯೋಜನೆ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ.ರೆಜಿಮೆಂಟಲ್ ಪ್ರಕ್ರಿಯೆಯೂ ಬದಲಾಗುವುದಿಲ್ಲ ಎಂದು ಸೇನಾ ವ್ಯವಹಾರಗಳ ಇಲಾಖೆ ಮಂಗಳವಾರ ಸ್ಪಷ್ಟಪಡಿಸಿದೆ.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ಉದ್ಯೋಗಾಕಾಂಕ್ಷಿಗಳು ಯೋಜನೆ ವಿರೋಧಿಸಿ ನಾವು ಯಾವುದೇ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ನಮಗೆ ಸಾಬೀತುಪಡಿಸಬೇಕು.ಅಂತಹವರನ್ನು ಮಾತ್ರ ನಾವು ಪರಿಗಣಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿರುವಷ್ಟು ಜನಸಂಖ್ಯಾ ಲಾಭಾಂಶವನ್ನು ಜಗತ್ತಿನ ಯಾವುದೇ ದೇಶ ಹೊಂದಿಲ್ಲ.