ಪ್ರತಿಪಕ್ಷಗಳು ಒಟ್ಟಾಗಿವೆ ಎಂಬ ಸಂದೇಶವನ್ನು ದೇಶಕ್ಕೆ ತಿಳಿಸಬೇಕು. ಅದಾದ ಬಳಿಕ ನಾವು ಪ್ರಣಾಳಿಕೆ ಹಾಗೂ ಇತರ ವಿವರಗಳನ್ನು ನಿರ್ಧರಿಸುತ್ತೇವೆ. ನಾವು ದೇಶದ ಇತರ ಎಲ್ಲ ವಿರೋಧ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಇಲ್ಲಿ ಯಾವುದೇ ಅಹಂಕಾರ ಹಾಗೂ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು. ಈ ವೇಳೆ ನಿತೀಶ್ ಕುಮಾರ್ ಮಾತನಾಡಿ, ನಾನು ದೀದಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಕೋಲ್ಕತ್ತಾದ ಪ್ರಗತಿಯನ್ನು ಕಂಡು ಬೆರಗಾಗಿದ್ದೇನೆ. ರಾಜ್ಯ ಸರ್ಕಾರ ಬಂಗಾಳದಲ್ಲಿ ತಂದಿರುವ ಅಭಿವೃದ್ಧಿ ಶ್ಲಾಘನೀಯವಾಗಿದೆ. ನಾವು ದೀದಿಯೊಂದಿಗೆ