ನವದೆಹಲಿ: ಬ್ಲ್ಯಾಕ್ ಫಂಗಸ್ ಗೆ ನೀಡಲಾಗುವ ಔಷಧಗಳಿಗೆ ಇನ್ನು ಮುಂದೆ ಜಿಎಸ್ ಟಿ ವಿಧಿಸಲಾಗುವುದಿಲ್ಲ. ಜೊತೆಗೆ ಕೊರೋನಾ ವ್ಯಾಕ್ಸಿನ್ ಮೇಲಿನ ಜಿಎಸ್ ಟಿ ಕಡಿತದ ಅವಧಿಯನ್ನೂ ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವ್ಯಾಕ್ಸಿನ್ ಮೇಲಿನ 5 ಶೇಕಡಾ ಜಿಎಸ್ ಟಿ ಮುಂದುವರಿಸಲಾಗಿದೆ. ಕೇಂದ್ರ ಈಗಾಗಲೇ ಘೋಷಿಸಿರುವಂತೆ ಶೇ. 75 ರಷ್ಟು ವ್ಯಾಕ್ಸಿನ್ ಖರೀದಿ ಮಾಡಲಿದ್ದು, ಅದರ ಜಿಎಸ್ ಟಿಯನ್ನೂ ಪಾವತಿಸಲಿದೆ.