ನವದೆಹಲಿ : ಅಸ್ಸಾಂನಲ್ಲಿ ಬಿಡುಗಡೆ ಮಾಡಿರುವ ನಾಗರಿಕರ ರಾಷ್ಟ್ರೀಯ ನೋಂದಣಿಯ ಅಂತಿಮ ಕರಡು ಪಟ್ಟಿಯಲ್ಲಿ 40 ಲಕ್ಷ ಜನರನ್ನು ಕೈಬಿಟ್ಟಿರುವುದು ದೊಡ್ಡ ವಿವಾದ ಸೃಷ್ಟಿ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಪಟ್ಟಿಯಿಂದ ಯಾವ ಭಾರತೀಯನನ್ನು ಹೊರಗಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅಸ್ಸಾಂನ ನಾಗರಿಕರ ರಾಷ್ಟ್ರೀಯ ನೋಂದಣಿಯ(ಎನ್ಆರ್ಸಿ) ಪಟ್ಟಿಯ ಪ್ರಕ್ರಿಯೆ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿದೆ. ಸುಪ್ರೀಂಕೋರ್ಟಿನ ಮಾರ್ಗದರ್ಶನದ ಪ್ರಕಾರವೇ ನಾವು ನಡೆದುಕೊಂಡಿದ್ದೇವೆ. ಪಟ್ಟಿಯಿಂದ ಯಾವ ಭಾರತೀಯನನ್ನು