ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ಧನಬಾದ್‌, ಸೋಮವಾರ, 21 ಏಪ್ರಿಲ್ 2014 (13:17 IST)

ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.
 
ಕಲ್ಲಿದ್ದಲು ನಗರ ಧನಬಾದ್‌ನಲ್ಲಿ  ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಮೋದಿಯವರ ಮೇಲೆ ಹರಿಹಾಯ್ದರು.  "ಮೋದಿ ಕಾ ಕೋಯಿ ಲೆಹರ್ ನಹೀಂ ಹೈ, ಮೋದಿ ಕಾ ಜೆಹರ್ ಹೈ"( ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ) ಎಂದು ರಮೇಶ್ ಟೀಕಿಸಿದರು. 
ಧನಬಾದ್‌ನಿಂದ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿ ಅಜಯ್ ದುಬೆ ಪರ ಪ್ರಚಾರ ಕೈಗೊಂಡಿದ್ದ ಅವರು ರಾಜ್ಯದ ಅತಿ ಕೆಟ್ಟ ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಸರಂದಾ ಕಾಡಿನಲ್ಲಿ  ಮತದಾನದ ಪ್ರಮಾಣ ಶೇಕಡಾವಾರು ಹೆಚ್ಚಳವಾಗಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
 
"ಈ ಹಿಂದೆ ಜನರು ತಮ್ಮ ಮತ ಚಲಾಯಿಸಲು  ಹೊರಬರುತ್ತಿರಲಿಲ್ಲ . ಈ ಬಾರಿ ಅಲ್ಲಿ ಪ್ರತಿಶತ 70 ರಷ್ಟು ಮತದಾನವಾಗಿದೆ " ಎಂದು ಅವರು ಹೇಳಿದರು.
 
ರಮೇಶ್ ಸಹ ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಪಿ ಎನ್ ಸಿಂಗ್ ವಿರುದ್ಧ ದಾಳಿ ನಡೆಸಿದ ಅವರು "ನಾನು ಸಂಸತ್ತಿನಲ್ಲಿ ಅಡಿಕೆ ತಿನ್ನುವ ಸಿಂಗ್‌ರನ್ನು ಮಾತ್ರ ನೋಡಿದ್ದೇನೆ. ಅವರು ಒಂದು ಪ್ರಶ್ನೆ ಕೇಳುವುದಿಲ್ಲ" ಎಂದು ಮೂದಲಿಸಿದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದಾರಿ ಮಧ್ಯೆಯೇ ಬಾಲಕಿಯರ ಸಮಸ್ಯೆ ನಿವಾರಿಸಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ಮಾಡಲು ಬಸ್ ಮೂಲಕ ಪ್ರಯಾಣಿಸುವಾಗ ದಾರಿ ಮಧ್ಯೆಯೇ ಸಿಎಂ ...

news

ಸಿಎಂ ಗ್ರಾಮವಾಸ್ತವ್ಯ ಮಾಡಿದ್ರೆ ನಮಗೂ ಲಾಭವಾಗುತ್ತೆ ಎಂದ ಈಶ್ವರ ಖಂಡ್ರೆ

ಬೆಂಗಳೂರು: ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಕ್ರೆಡಿಟ್ ನಮಗೆ ಸಿಗಲ್ಲ ಎಂಬ ಕೆಲವು ಕಾಂಗ್ರೆಸ್ ನಾಯಕರ ...

news

ಸಂಸತ್ತಿನಲ್ಲಿ ತೇಜಸ್ವಿ-ಪ್ರಜ್ವಲ್ ರೇವಣ್ಣ ಚಕಮಕಿ

ನವದೆಹಲಿ: ಲೋಕಸಭೆ ಚುನಾವಣೆ ನೂತನವಾಗಿ ಆಯ್ಕೆಯಾದ ಪ್ರಜ್ವಲ್ ರೇವಣ್ಣ ಮತ್ತು ತೇಜಸ್ವಿ ಸೂರ್ಯ ನಿನ್ನೆ ...

news

ತೋಟದಲ್ಲಿ 15 ಅಡಿ ಉದ್ದದ ಕಿಂಗ್ ಕೋಬ್ರಾ ಪತ್ತೆ

ಕೊಲ್ಲಂ: ಕೊಲ್ಲಂ ಜಿಲ್ಲೆಯ ಅರಣ್ಯದ ಬಳಿಯ ಅಂಬಾಟ್ ಟೀ ಎಸ್ಟೇಟ್‌ನಲ್ಲಿ 15 ಸುಮಾರು ಒಂದು ಅಡಿ ಉದ್ದದ ...