ಮಳೆ ಇಫೆಕ್ಟ್: ಈ ಬಾರಿ ಕೇರಳದಲ್ಲಿ ಓಣಂಗೂ ಕತ್ತರಿ

ತಿರುವನಂತಪುರಂ| Krishnaveni K| Last Modified ಗುರುವಾರ, 16 ಆಗಸ್ಟ್ 2018 (08:26 IST)
ತಿರುವನಂತಪುರಂ: ವಿಪರೀತ ಮಳೆಯಿಂದಾಗಿ ತತ್ತರಿಸುವ ಕೇರಳದಲ್ಲಿ ಈ ಬಾರಿ ನಾಡಹಬ್ಬ ಓಣಂ ಆಚರಣೆ ಕಳೆಗುಂದಲಿದೆ.

ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಬೇಕಿದ್ದ ಓಣಂ ಆಚರಣೆ ಮಾಡದೇ ಇರಲು ಸಿಎಂ ಪಿಣರಾಯಿ ವಿಜಯನ್ ಸರ್ಕಾರ ತೀರ್ಮಾನಿಸಿದೆ. ಹಬ್ಬಕ್ಕಾಗಿ ಮೀಸಲಿರಿಸಲಾಗಿದ್ದ 30 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ಪ್ರವಾಹ ಸಂತ್ರಸ್ತರಿಗೆ ಬಳಸಲು ತೀರ್ಮಾನಿಸಲಾಗಿದೆ.


ಆಗಸ್ಟ್ 25 ರಂದು ತಿರು ಓಣಂ ಹಬ್ಬವಿದೆ. ಆದರೆ ಇದುವರೆಗೆ ಕಂಡು ಕೇಳರಿಯದ ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಹಬ್ಬದ ಸಂಭ್ರಮಾಚರಣೆ ಮಾಡುವ ಬದಲು ಸಂತ್ರಸ್ತರಿಗೆ ನೆರವಾಗಲು ಸರ್ಕಾರ ತೀರ್ಮಾನಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :