'ರಾಹುಲ್‌ ಗಾಂಧಿಯನ್ನು ಪ್ರಧಾನಿಯಾಗಿ ಸ್ವೀಕರಿಸಲು ಯಾರೂ ಸಿದ್ಧರಿಲ್ಲ- ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌

ನವದೆಹಲಿ, ಮಂಗಳವಾರ, 29 ಜನವರಿ 2019 (10:08 IST)

ನವದೆಹಲಿ :ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದು ಮೋದಿ ಅವರೇ ಪುನಃ ಪ್ರಧಾನಿಯಾಗುವುದು ಖಂಡಿತಾ’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಭವಿಷ್ಯ ನುಡಿದಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ದೇಶಕ್ಕೆ ಸಮರ್ಥ ನಾಯಕತ್ವದ ಅಗತ್ಯವಿದೆ. ಅದಕ್ಕೆ ಮೋದಿಯವರೇ ಸೂಕ್ತ ವ್ಯಕ್ತಿ. ಭಾರತದ ಗಡಿ ದೇಶಗಳ ಪೈಕಿ ಹೆಚ್ಚಿನವು ನಮಗೆ ವೈರಿಗಳಾಗಿವೆ. ಇಂಥ ಸನ್ನಿವೇಶದಲ್ಲಿ ಸ್ಥಿರ ಸರಕಾರದ ಅವಶ್ಯಕತೆಯೂ ಇದೆ’ ಎಂದು ಹೇಳಿದ್ದಾರೆ.


'ರಾಹುಲ್‌ ಗಾಂಧಿ ಅವರನ್ನು ಸ್ವೀಕರಿಸಲು ಯಾರೂ ಸಿದ್ಧರಿಲ್ಲ. ಕಾಂಗ್ರೆಸ್‌ ಪಕ್ಷ ತನ್ನ ರಾಜಕೀಯ ವಿರೋಧಿಗಳು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ. ದೇಶಕ್ಕೆ ಕಾಂಗ್ರೆಸ್‌ ಮಾಡಿದ್ದೇನು ಎನ್ನುವುದು ಜನತೆಗೆ ಗೊತ್ತಿದೆ, ಆದುದರಿಂದ ಮುಂದಿನ ಪ್ರಧಾನಿ ಮೋದಿ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅನಂತ್ ಕುಮಾರ್ ಹೆಗಡೆಯನ್ನು ಸಂಪುಟದಿಂದ ವಜಾಗೊಳಿಸಿ - ರಾಹುಲ್ ಗಾಂಧಿ ಆಗ್ರಹ

ನವದೆಹಲಿ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರ ...

news

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಇನ್ನಿಲ್ಲ

ನವದೆಹಲಿ : ಅನಾರೋಗ್ಯದ ಹಿನ್ನಲೆಯಲ್ಲಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಇಂದು ...

news

ಸೈನಿಕನ ವೇಷ ಹಾಕಿ OLXನಲ್ಲಿ ವಾಹನ ಸೇಲ್ ಗಿಟ್ಟು ಮೋಸ ಮಾಡುವವರಿದ್ದಾರೆ ಎಚ್ಚರಿಕೆ

ಬೆಂಗಳೂರು : OLXನಲ್ಲಿ ವಾಹನ ಸೇಲ್ ಗಿಡುವ ನೆಪದಲ್ಲಿ ವ್ಯಕ್ತಿಯೊಬ್ಬ ಸೈನಿಕನಂತೆ ವೇಷ ಹಾಕಿ ಜನರನ್ನು ಮೋಸ ...

news

ರಕ್ಷಣೆ ನೀಡಬೇಕಾದ ಸೆಕ್ಯೂರಿಟಿ ಗಾರ್ಡ್ ನಿಂದಲೇ ವಕೀಲೆಯ ಮೇಲೆ ಅತ್ಯಾಚಾರಕ್ಕೆ ಯತ್ನ

ಬೆಂಗಳೂರು : ರಾತ್ರಿ ವೇಳೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಕೀಲೆಯ ಮೇಲೆ ಸೆಕ್ಯೂರಿಟಿ ಗಾರ್ಡ್ ...