ನವದೆಹಲಿ: ಇನ್ನೇನು ಸ್ವಾತಂತ್ರ್ಯ ದಿನಾಚರಣೆಗೆ ನಾಲ್ಕೇ ದಿನ ಬಾಕಿಯಿದೆ. ಈ ಸಂದರ್ಭದಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆಯೊಂದನ್ನು ನೀಡಿದೆ. ಸ್ವಾತಂತ್ರ್ಯ ದಿನಾಚರಣೆ ಆಚರಿಸುವಾಗ ಕೈಯಲ್ಲಿ ಭಾರತದ ಬಾವುಟ ಹಿಡಿದು ಸಂಭ್ರಮಿಸಲು ಕಡಿಮೆ ವೆಚ್ಚದಲ್ಲಿ ಸಿಗುವ ಪ್ಲಾಸ್ಟಿಕ್ ಧ್ವಜಗಳನ್ನು ಬಳಸಲಾಗುತ್ತದೆ. ಬಳಿಕ ಅದನ್ನು ಎಲ್ಲೆಂದರಲ್ಲಿ ಬಿಸಾಕಲಾಗುತ್ತದೆ. ಆದರೆ ಇದರಿಂದ ದೇಶದ ಹೆಮ್ಮೆಯ ಪ್ರತೀಕಕ್ಕೆ ಅವಮಾನವಾಗುತ್ತದೆ.ಹೀಗಾಗಿ ಈ ಬಾರಿ ಪ್ಲಾಸ್ಟಿಕ್ ಧ್ವಜ ಮಾರುಕಟ್ಟೆಯಲ್ಲಿ ಲಭ್ಯವಾಗದಂತೆ ನೋಡಿಕೊಳ್ಳಿ ಎಂದು ಕೇಂದ್ರ ರಾಜ್ಯಗಳಿಗೆ ಸೂಚನೆ ನೀಡಿದೆ.