ಮುಂದಿನ ವಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ನರೇಂದ್ರ ಮೋದಿ ಮುಂದಾಳತ್ವದ ಎನ್ಡಿಎ ಸರಕಾರಕ್ಕೆ ಸಲಹೆಗಳನ್ನು ನೀಡಲು ಸದಾ ಸಿದ್ಧರಾಗಿದ್ದೇವೆ. ಆದರೆ ನಾವು ರಿಮೋಟ್ ಕಂಟ್ರೋಲ್ ತರಹ ಸರಕಾರವನ್ನು ನಿಯಂತ್ರಿಸುವುದಿಲ್ಲ ಎಂದು ಬಿಜೆಪಿಯ ಸೈಂದ್ಧಾಂತಿಕ ಮಾರ್ಗದರ್ಶಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳಿದೆ. ಬಿಜೆಪಿ ಸರಕಾರದಲ್ಲಿ ನೀವು ಯಾವ ಪಾತ್ರವನ್ನು ವಹಿಸಲಿದ್ದೀರಿ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿಯವರನ್ನು ಕೇಳಿದಾಗ ಉತ್ತರಿಸಿದ ಅವರು ನಾವಾಗಿ ಯಾವ ಪಾತ್ರವನ್ನು ವಹಿಸುವುದಿಲ್ಲ.