ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆಯಾ..? ಹೌದು ಎನ್ನುವಂತಿದೆ ಮಾಧ್ಯಮಗಳು ಬಿಡುಗಡೆ ಮಾಡಿರುವ ಆರ್`ಟಿಐ ಮಾಹಿತಿ. ಶಶಿಕಲಾ ಜೈಲು ಸೇರಿ 6-7 ತಿಂಗಳು ಕಳೆದಿದ್ದು, ಇದುವರೆಗೂ ಶಶಿಲಾಗೆ ಯಾವುದೇ ಕೆಲಸ ನೀಡಿಲ್ಲ. ಜೈಲಿನ ನಿಯಮದ ಪ್ರಕಾರ ಜೈಲು ಶಿಕ್ಷೆಗೀಡಾದ ಕೈದಿಗೆ ಜೈಲಿನಲ್ಲಿರುವ ಕೆಲಸಗಳ ಪೈಕಿ ಯಾವುದಾದರೊಂದು ಕೆಲಸ ನೀಡಬೇಕು. ಆದರೆ, ಜೈಲಿನಲ್ಲಿ ಈ ಬಗ್ಗೆ ಯಾವುದೇ ನಿಯಮ ಪಾಲನೆ ಮಾಡಲಾಗಿಲ್ಲ