ಬ್ರಿಟಿಷ್ ಸರ್ಕಾರದ ಬಳಿ ಇರುವ ಭಾರತ ಮೂಲದ ಕೊಹಿನೂರ್ ವಜ್ರ ಹಿಂದಕ್ಕೆ ತರಬೇಕೆಂದು ದೇಶದಾದ್ಯಂತ ಬಹಳ ಒತ್ತಾಯ ಕೇಳಿಬರುತ್ತಿದೆ. ಇದೀಗ ಕಾಂಗ್ರೆಸ್ ಸಹ ಅಮೂಲ್ಯ ರತ್ನವನ್ನು ಹಿಂದಕ್ಕೆ ತರಬೇಕೆಂದು ಒತ್ತಾಯಿಸುತ್ತಿದೆ. ಭಾರತಕ್ಕೆ ಸೇರಿದ ಎಲ್ಲ ಪರಂಪರಾಗತ ವಸ್ತುಗಳನ್ನು ಮರಳಿ ತರಬೇಕು ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ ಒತ್ತಾಯಿಸಿದ್ದಾರೆ. ತನ್ನ ಹಿಂದಿನ ನಿಲುವನ್ನು ಬದಲಿಸಿದ್ದ ಕೇಂದ್ರ ಸರ್ಕಾರ ಕೊಹಿನೂರ್ ವಜ್ರವನ್ನು ಮರಳಿ ತರಲು ಸೌಹಾರ್ದಯುತ ಪ್ರಯತ್ನವನ್ನು ನಡೆಸುತ್ತೇವೆ