ಪಾಟ್ನಾ : ವ್ಯಕ್ತಿಯೋರ್ವ ನರ್ಸ್ ಅನ್ನು ಚಾಕುವಿನಿಂದ ಹಲವು ಬಾರಿ ಇರಿದು ಕೊಂದ ಬಳಿಕ ಅಲ್ಲಿಂದ ಪರಾರಿಯಾದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಮೃತ ನರ್ಸ್ ಅನ್ನು ಸೋನಿ ಕುಮಾರಿ (25) ಎಂದು ಗುರುತಿಸಲಾಗಿದ್ದು, ಕೌಟುಂಬಿಕ ದ್ವೇಷದ ಹಿನ್ನೆಲೆ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಗರದ ಜನನಿಬಿಡ ತಾಣವಾದ ಪಾಟ್ನಾದ ಕಂಕರ್ಬಾಗ್ನಲ್ಲಿ ಶನಿವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಘಟನೆ ನಡೆದಿದೆ.ಘಟನೆಯಲ್ಲಿ ನರ್ಸ್