ಪಾಟ್ನಾ : ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಟಿವಿ ಪರದೆಯಲ್ಲಿ ಅಶ್ಲೀಲ ವೀಡಿಯೋ ಪ್ರಸಾರವಾಗಿ ಸ್ಥಳದಲ್ಲಿ ನೆರೆದಿದ್ದ ನೂರಾರು ಪ್ರಯಾಣಿಕರು ಮುಜುಗರಕ್ಕೀಡಾದ ಪ್ರಸಂಗ ಬಿಹಾರದ ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ 9:30ರ ವೇಳೆಗೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿದ್ದ ಟಿವಿ ಪರದೆ ಮೇಲೆ ಸುಮಾರು 3 ನಿಮಿಷಗಳ ಕಾಲ ಅಶ್ಲೀಲ ವೀಡಿಯೋ ಪ್ರದರ್ಶನವಾಗಿದೆ. ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರಿದ್ದು, ಈ ವೇಳೆ ಜನರು ಮುಜುಗರಕ್ಕೀಡಾಗಿದ್ದಾರೆ.ಘಟನೆ ನಡೆದ ತಕ್ಷಣವೇ ಪ್ರಯಾಣಿಕರು