ಜೈಪುರ : ಹಳೆ ದ್ವೇಷದ ಹಿನ್ನೆಲೆ ದಲಿತ ಯುವಕನನ್ನು ಅಪಹರಿಸಿ ಹಲ್ಲೆ ಮಾಡಿ, ಆತನಿಗೆ ಮೂತ್ರ ಕುಡಿಸಿರುವ ಘಟನೆ ಚೂರು ಜಿಲ್ಲೆಯಲ್ಲಿ ನಡೆದಿದೆ.ಉಮೆಶ್, ಬೀರ್ಬಲ್ ಬಂಧಿತ ಆರೋಪಿಗಳಾಗಿದ್ದಾರೆ. ರುಖಾಸರ್ ಗ್ರಾಮದ ನಿವಾಸಿ ರಾಕೇಶ್ ಮೇಘವಾಲ್ ಸಂತ್ರಸ್ತ ಯುವಕನಾಗಿದ್ದಾನೆ. ಸಂತ್ರಸ್ತ ರಾಕೇಶ್ ಮೇಘವಾಲ್ ನೀಡಿದ ಪೊಲೀಸ್ ದೂರಿನ ಪ್ರಕಾರ, ಆರೋಪಿಗಳು ರಾತ್ರಿ 11 ಗಂಟೆಯ ಸುಮಾರಿಗೆ ಮನೆಯಿಂದ ಅಪಹರಿಸಿ ಹೊಲಕ್ಕೆ ಕರೆದೊಯ್ದಿದ್ದರು. ಬಲವಂತವಾಗಿ ಮದ್ಯ ಕುಡಿಸಿ ನಂತರ ಅದೇ ಬಾಟಲಿಯಲ್ಲಿ ಮೂತ್ರ ವಿಸರ್ಜನೆ