ಈ ಇಳಿ ವಯಸ್ಸಲ್ಲಿ ಈ ವ್ಯಕ್ತಿಗೆ ಬೇಕಿತ್ತಾ ಇಂಥಾ ಚಪಲ?!

ಹೈದರಾಬಾದ್| Krishnaveni K| Last Modified ಶುಕ್ರವಾರ, 14 ಜನವರಿ 2022 (09:22 IST)
ಹೈದರಾಬಾದ್: ಊರು ಹೋಗು, ಕಾಡು ಬಾ ಎನ್ನುವ ಈ ವಯಸ್ಸಿನಲ್ಲಿ ಅಪ್ರಾಪ್ತ ಹುಡುಗಿ ಜೊತೆ ಚೆಲ್ಲಾಟವಾಡಲು ಹೋಗಿ 72 ವರ್ಷದ ವೃದ್ಧ ಪೊಲೀಸರ ಅತಿಥಿಯಾಗಿದ್ದಾನೆ.

ಸಾಹಿತಿಯಾಗಿರುವ ಗಧೆ ವೀರಾ ರೆಡ್ಡಿ ಆರೋಪಿ. ಈತ 11 ವರ್ಷದ ಬಾಲಕಿ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದ ಆರೋಪಕ್ಕೊಳಗಾಗಿದ್ದಾನೆ.


ಸಂತ್ರಸ್ತೆಯ ತಾಯಿ ಆರೋಪಿಯ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದಳು. ಈ ವೇಳೆ ಬಾಲಕಿಯ ಖಾಸಗಿ ಅಂಗಾಂಗಕ್ಕೆ ಕೈ ಹಾಕಿ ಅಸಭ್ಯವಾಗಿ ನಡೆದುಕೊಂಡಿದ್ದ. ಬಳಿಕ ಇನ್ನೊಂದು ದಿನ ಯಾರೂ ಇಲ್ಲದ ವೇಳೆ ಸಂತ್ರಸ್ತೆಯ ಮನೆಗೆ ಹೋಗಿ ಆಕೆಯ ಜೊತೆ ಅಶ್ಲೀಲವಾಗಿ ವರ್ತಿಸಿದ್ದ. ಈ ಬಗ್ಗೆ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :