ನವದೆಹಲಿ: ಬಿಎಸ್ ಪಿ ನಾಯಕಿ ಮಾಯಾವತಿ ಅವರನ್ನು ಮುಂದಿನ ಪ್ರಧಾನಿ ಮಾಡಲು ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸುತ್ತೇವೆ ಎಂದು ಹರ್ಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ಹೇಳಿದ್ದಾರೆ.ಒಬ್ಬ ಬಡ ಕುಟುಂಬದ ಹೆಣ್ಣು ಮಗಳು ಮಾಯಾವತಿ ಪ್ರಧಾನಿಯಾಗಲು ನಾನು ಬಿಜೆಪಿ-ಕಾಂಗ್ರೆಸ್ಸೇತರ ಎಲ್ಲಾ ತೃತೀಯ ರಂಗದ ಪಕ್ಷಗಳನ್ನು ಒಗ್ಗೂಡಿಸಲು ಪ್ರಾಮಾಣಿಕ ಯತ್ನ ನಡೆಸುವೆ ಎಂದು ಕಾರ್ಯಕ್ರಮವೊಂದರಲ್ಲಿ ಚೌಟಾಲಾ ಹೇಳಿದ್ದಾರೆ.ಐಎನ್ ಎಲ್ ಡಿ ಪಕ್ಷದ ನೇತಾರರಾಗಿರುವ ಓಂ ಪ್ರಕಾಶ್ ಚೌಟಾಲಾ ನಾನು ಜೈಲಿಗೆ ಹೋಗಿದ್ದಾಗ