ಮುಂಬೈ: ಕರೆ ಮಾಡಲು ಮೊಬೈಲ್ ಕೇಳಿದಾಗ ಕೊಡಲಿಲ್ಲವೆಂಬ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.31 ವರ್ಷದ ವ್ಯಕ್ತಿ ಮತ್ತು ಆರೋಪಿ ಕೆಲಸದ ನಿಮಿತ್ತ ಮುಂಬೈನಲ್ಲಿ ನೆಲೆಸಿದ್ದರು. ಊರಿಗೆ ಕರೆ ಮಾಡಲು ಸಂತ್ರಸ್ತ ಆರೋಪಿ ಬಳಿ ಫೋನ್ ಕೇಳಿದ್ದ. ಆದರೆ ಆತ ಕೊಡಲು ಒಪ್ಪಲಿಲ್ಲ.ಇದೇ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟವಾಗಿದೆ. ಇದೇ ಸಿಟ್ಟಿನಲ್ಲಿ ಕೊಲೆಗೀಡಾದ ವ್ಯಕ್ತಿ ಮೊಬೈಲ್ ನೆಲಕ್ಕೆ ಬಿಸಾಕಿ ಒಡೆದು ಹಾಕಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಸಂತ್ರಸ್ತನ