ನವದೆಹಲಿ: ಸಂಪೂರ್ಣ ಸಸ್ಯಾಹಾರಿಗಳಾಗಿರುವ, ಧೂಮಪಾನ, ಮದ್ಯಪಾನ ಚಟಗಳಿಲ್ಲದ ಪೊಲೀಸರು ಬೇಕಾಗಿದ್ದಾರೆ! ಹೀಗಂತ ಒಂದು ಜಾಹೀರಾತು ನೀಡುತ್ತಿರುವುದು ಕುಂಭ ಮೇಳೆ ಆಯೋಜಕರು!ಮುಂದಿನ ವರ್ಷ ಜನವರಿಯಲ್ಲಿ ಅಲಹಾಬಾದ್ ನಲ್ಲಿ ನಡೆಯಲಿರುವ ಕುಂಭ ಮೇಳದಲ್ಲಿ ಭದ್ರತೆಗೆಂದು ನಿಯೋಜನೆಗೊಳ್ಳಲಿರುವ ಪೊಲೀಸ್ ಅಧಿಕಾರಿಗಳಲ್ಲಿ ಈ ಗುಣಗಳಿರಬೇಕಂತೆ! ಹಾಗಂತ ಕುಂಭ ಮೇಳೆ ಆಯೋಜಕರು ಬೇಡಿಕೆಯಿಟ್ಟಿದ್ದಾರೆ.ಕುಂಭ ಮೇಳದ ಭದ್ರತೆ ಕೆಲಸಗಳು ಈ ವರ್ಷ ಅಕ್ಟೋಬರ್ ನಿಂದಲೇ ಆರಂಭವಾಗಲಿದೆ. ಇದಕ್ಕಾಗಿ 10 ಸಾವಿರ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಇಲ್ಲಿ ಧಾರ್ಮಿಕ ಶ್ರದ್ಧೆಯಿರುವ,