ಮಾರ್ಕೇಂಡೇಯ ಜಲಾಶಯಕ್ಕೂ ತಮಿಳುನಾಡಿನಿಂದ ವಿರೋಧ

ನವದೆಹಲಿ, ಬುಧವಾರ, 8 ಮೇ 2019 (12:09 IST)

ನವದೆಹಲಿ : ಮೇಕೆದಾಟು ಯೋಜನೆ ಬಳಿಕ ತಮಿಳುನಾಡು ಇದೀಗ ಮಾರ್ಕೇಂಡೇಯ ಜಲಾಶಯಕ್ಕೂ ವಿರೋಧ ವ್ಯಕ್ತಪಡಿಸುತ್ತಿದೆ.
ಪೆನ್ನಾರ್ ಮತ್ತು ಪಾಲಾರ್ ಕಣಿವೆ ವ್ಯಾಪ್ತಿಯ ನೀರು ಬಳಸಿಕೊಳ್ಳುವ `ಮಾರ್ಕಂಡೇಯ' ಯೋಜನೆಗೆ ಕುರಿತು ಇತರ ರಾಜ್ಯಗಳಿಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ  ಯೋಜನೆಗಳಿಗೆ ಅವಕಾಶ ನೀಡದಂತೆ ತಮಿಳುನಾಡು ಸುಪ್ರೀಂಕೋರ್ಟ್ ನಲ್ಲಿ ಮಂಗಳವಾರ ಮೇಲ್ಮನವಿ ಸಲ್ಲಿಸಿದೆ.


ಎತ್ತಿನ ಹೊಳೆ ಯೋಜನೆಗಾಗಿ ನಿರ್ಮಿಸಲು ಹೊರಟಿರುವ ಮಾರ್ಕೆಂಡೇಯ ಜಲಾಶಯ ಪೆನ್ನಾರ್ ನದಿ ನೈಸರ್ಗಿಕ ಹರಿವಿಗೆ ಧಕ್ಕೆ ಮಾಡಲಿದೆ. ಡ್ಯಾಂ ನಿರ್ಮಾಣದಿಂದ ತಮಿಳುನಾಡಿನ ಆರು ಜಿಲ್ಲೆಗಳಿಗೆ ತೊಂದರೆಯಾಗಲಿದೆ. ಅಷ್ಟೇ ಅಲ್ಲದೇ ಕುಡಿಯುವ ನೀರಿನ ನೆಪದಲ್ಲಿ ಕೃಷಿ ನೀರಾವರಿಗೆ ಕರ್ನಾಟಕ ಯೋಜನೆ ರೂಪಿಸಿದೆ. ಕೆಳ ರಾಜ್ಯಗಳ ಒಪ್ಪಿಗೆ ಇಲ್ಲದೇ ಕೆ.ಸಿ.ವ್ಯಾಲಿ ಸೇರಿ ಇನ್ನೂ ಯಾವ ಯೋಜನೆಗೂ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮತ್ತೊಮ್ಮೆ ಸುಪ್ರೀಂಕೋರ್ಟ್ ಗೆ ಕ್ಷಮೆ ಕೇಳಿದ ರಾಹುಲ್ ಗಾಂಧಿ

ನವದೆಹಲಿ : ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ ಎಂದು ತಮ್ಮ ವೈಯಕ್ತಿಕ ಹೇಳಿಕೆಯನ್ನು ...

news

ಹಾಡುಹಗಲೇ ಪತಿಗೆ ಥಳಿಸಿ, ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು

ಜೈಪುರ : ಹಾಡಹಗಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳನ್ನು ತಡೆದು ಕಾಮುಕರ ಗುಂಪೊಂದು ಪತ್ನಿಯ ಮೇಲೆ ...

news

ಇವುಗಳ ಹಾವಳಿ ತಾಳಲಾರದೆ ಠಾಣೆಯನ್ನೇ ಬಿಟ್ಟು ಪೊಲೀಸರು ಓಡಿಹೋಗಿದ್ದಾರಂತೆ

ಪ್ಯಾರಿಸ್ : ಜನಸಾಮಾನ್ಯರಿಗೆ ಯಾರಾದರೂ ತೊಂದರೆ ಕೊಟ್ಟರೆ ಪೊಲೀಸರು ಸಹಾಯಕ್ಕೆ ಬಂದು ಸಮಸ್ಯೆಯನ್ನು ...

news

46 ದಿನಗಳೊಳಗೆ ಈ ವ್ಯಕ್ತಿ 20 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಗೊತ್ತಾ? ಕೇಳಿದ್ರೆ ‍ಶಾಕ್ ಆಗ್ತೀರಾ

ವಾಷಿಂಗ್ಟನ್ : ಕೆಲವರು ತೂಕ ಇಳಿಸಲು ವ್ಯಾಯಾಮ, ಡಯಟ್, ವಾಕಿಂಗ್ ಎಂದು ಏನೆಲ್ಲಾ ಕಸರತ್ತುಗಳನ್ನು ...