ನ್ಯೂಯಾರ್ಕ್ : ಹಾಲಿವುಡ್ ನಟ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ವಿಲಿಯಂ ಹರ್ಟ್ ಅಕಾ ಜನರಲ್ ಥಡ್ಡಿಯಸ್ ರಾಸ್ (71) ಭಾನುವಾರ ನಿಧನರಾಗಿದ್ದಾರೆ.ನೆನ್ನೆಯಷ್ಟೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದ ಅವರು, ಕುಟುಂಬದೊಂದಿಗೆ ಸಂಭ್ರಮಸಿದ್ದರು. ಅವರ 72ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬಾರದ ಲೋಕಕ್ಕೆ ಹೋಗಿದ್ದಾರೆ ವಿಲಿಯಂ. ತಂದೆಯ ಅಗಲಿಕೆಯನ್ನು ಪುತ್ರ ವಿಲ್ ಭಾನುವಾರ ಸಾಮಾಜಿಕ ಜಾಲತಾಣ ಮೂಲಕ ಖಚಿತಪಡಿಸಿದ್ದಾರೆ.ನಾಲ್ಕು ಜನ ಮಕ್ಕಳು ಮತ್ತು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ ವಿಲಿಯಂ.